ಮಹರ್ಷಿ ವಸಿಷ್ಠ / Maharshi vasista
ಸಂತ ತುಳಸಿದಾಸರು ಶ್ರೀರಾಮನ ಬದಕನ್ನು ‘ಶ್ರೀರಾಮ ಚರಿತ ಮಾನಸ’ ಅಂತ ದಾಖಲಿಸಿದರು. ರಾಮಾಯಣ ಪುರಾಣ ಅಲ್ಲ, ಶ್ರೀರಾಮನ ಚರಿತ್ರೆ. ‘ಬದುಕಿ ಬಾಳಿದ ಮಹಾಮಹಿಮರು ನನ್ನ ಪೂರ್ವಜರು, ಪುರಾಣ ಕಟ್ಟುಕಥೆಯ ಪಾತ್ರಗಳಲ್ಲ’ ಎನ್ನುವ ಅರಿವು ಮೂಡಿದರೆ ಪ್ರಾಯಶಃ ಜನಮಾನಸದಲ್ಲಿ ಬದುಕು ಹೆಚ್ಚು ಜವಾಬ್ದಾರಿಯುತವಾಗಿ ಕಂಡೀತು.
‘ಜಿತೇಂದ್ರಿಯತ್ವ ಎಂದರೆ ಇಂದ್ರಿಯಗಳನ್ನ ಕೊಲ್ಲುವುದಲ್ಲ, ಉಪವಾಸವಿಟ್ಟು ಪೀಡಿಸುವುದೂ ಅಲ್ಲ, ಇಂದ್ರಿಯಗಳ ಮಾಯೆಗೆ ಒಳಗಾಗದಿರುವುದು. ಇಂದ್ರಿಯಗಳು ವಶದಲ್ಲಿದ್ದರೆ, ಅಂಕೆಯಲ್ಲಿದ್ದರೆ ಸ್ವಾತಂತ್ರ್ಯ, ಅಲ್ಲದ್ದು ದಾಸ್ಯ. ಇದು ‘ವಸಿಷ್ಠ’. ವಸಿಷ್ಠ ಕೇವಲ ಪ್ರಾತಃಸ್ಮರಣೀಯ ಮಾತ್ರ ಅಲ್ಲ, ನಿತ್ಯ ಅನುಕರಣೀಯ. ಈ ಭಾವ ಬಿತ್ತುವ ನಿಟ್ಟಿನಲ್ಲಿ ಗುರುಗ್ರಂಥಮಾಲಿಕೆ ಒಂದು ಸ್ವಾಗತಾರ್ಹ ಪ್ರಯತ್ನ.
ಸೇತುರಾಮ್
ಚಿಂತಕ