ಮಹರ್ಷಿ ಭೃಗು / Maharshi bhrigu
ಇಂದಿನ ಜ್ಯೋತಿಷ್ಯ ಶಾಸ್ತ್ರದ ತಳಹದಿ ಎಂದು ಪರಿಗಣಿಸಲಾಗುವ ‘ಭೃಗು ಸಂಹಿತೆ’ಯ ಕರ್ತೃ ಚಾಕ್ಷುಷ ಮನ್ವಂತರದ ಸಪ್ತರ್ಷಿಗಳಲ್ಲಿ ಒಬ್ಬರಾದ ಭೃಗು ಮಹರ್ಷಿಗಳು. ಅನುಸರಣ ಯೋಗ್ಯವಾದ ಅವರ ಜೀವನಗಾಥೆ ವೇಗದ ಗತಿ ಹೊಂದಿರುವ ಈ ಕಾಲದಲ್ಲಿ ಕ್ರಮೇಣ ಕಾಲಚಕ್ರದಲ್ಲಿ ಅಡಿಯಾಗುತ್ತಾ ಬಂದಿರುವುದನ್ನು ಗಮನಿಸಲಾಗಿದೆ.
ಇದೀಗ ಹೊಸಗಾಲದ ನಾಡಿ ಮಿಡಿತ ಗಮನಿಸಿ, ಜ್ಞಾನದ ಹರಿವು ಸರಾಗವಾಗುವಂತೆ ಮಾಡಿ, ಭವಿಷ್ಯದ ಪೀಳಿಗೆಗೆ ದಾಟಿಸುವ ಗುರುಗ್ರಂಥಲಿಕೆಯಲ್ಲಿನ ಪುಟ್ಟ ಪುಸ್ತಕಗಳು ಮಹತ್ತರವಾದ ಸತ್ಕಾರ್ಯವನ್ನು ಮಾಡುತ್ತಿವೆ.
ಮಂಗಳ.ಟಿ.ಎಸ್. ತುಮರಿ