Mahesha Araballi
Mahesha Araballi
ಜಗದೀಶಶರ್ಮಾ ಸಂಪ ಅವರ “ಜಸ್ಟ್ 1 ಗಂಟೆ” ಸರಣಿಯ ಪುಸ್ತಕ “ಕಲಿಸದೇ ಕಲಿಸುವ 24 ಗುರುಗಳು” ನಿಜಕ್ಕೂ ಕೆಲವು ವಿಚಾರಗಳನ್ನು ಮೆಲುಕು ಹಾಕುವಂತೆ ಮಾಡುತ್ತದೆ. ಅವಧೂತರು ಪ್ರಕೃತಿಯನ್ನು ಗಮನಿಸುತ್ತಾ ಕಲಿತ ೨೪ ಕಲಿಕೆಗಳ ಸಾರ ಈ ಕೃತಿಯಲ್ಲಿದೆ.
ಆ ೨೪ ಕಲಿಕೆಯ ಪ್ರೇರಣೆಗಳು ಹೀಗಿವೆ – ಭೂಮಿ, ವಾಯು, ಆಕಾಶ, ನೀರು, ಅಗ್ನಿ, ಚಂದ್ರ, ಸೂರ್ಯ, ಪಾರಿವಾಳ, ಹೆಬ್ಬಾವು, ಸಮುದ್ರ, ಪತಂಗ, ಜೇನ್ನೊಣ, ಆನೆ, ಜೇನು ಕೀಳುವವ, ಜಿಂಕೆ, ಮೀನು, ಪಿಂಗಲೆಯೆಂಬ ವೇಶ್ಯೆ, ನೀರ ಹಕ್ಕಿ, ಮಗು, ಕುಮಾರಿ, ಬಿಲ್ಲುಗಾರ, ಸರ್ಪ, ಜೇಡ, ಕಣಜದ ಹುಳು.
ಕುತೂಹಲ ತಣಿಸುವ ಈ ಕೃತಿಯ ಅಧ್ಯಾಯಗಳನ್ನು ಪಂಚತಂತ್ರ ಕಥೆಗಳಂತೆ ಯಾವುದೇ ವಯಸ್ಸಿನವರು ಓದಿಕೊಳ್ಳಬಹುದು.