ಕುಂತಿ-ಪಾಂಡು

ಅವಘಡವಾದ ಅವಕಾಶಗಳಲ್ಲೇ ಆದರ್ಶ ಮೆರೆದವರು

ಜೀವಂತಿಕೆ, ಕ್ರಿಯಾಶೀಲತೆ, ಮೇಧೆ, ಪ್ರಬುದ್ಧತೆ, ಗಾಂಭೀರ್ಯ, ವಿನಯ, ವಿದ್ಯೆ, ವಿವೇಕ, ತ್ಯಾಗಶೀಲತೆ, ಸಹಿಷ್ಣುತೆ, ಸಮರ್ಪಣೆ, ತಪಸ್ಸು, ಪಶ್ಚಾತ್ತಾಪ, ಸಹಾನುಭೂತಿ, ಸೇವೆ, ಸಾಮರ್ಥ್ಯ, ಕೌಶಲ, ದಾರ್ಢ್ಯ, ಕಷ್ಟ, ನಷ್ಟ, ಸೋಲು, ಗೆಲುವು, ಸವಾಲು, ಸಮೃದ್ಧಿ, ಸೌಂದರ್ಯ, ನೆನಪು, ಕನಸು, ಪ್ರೀತಿ, ವಾತ್ಸಲ್ಯ, ವಿಶ್ವಾಸ, ಓಟ, ನೆಲೆ.

ಕುಂತಿ-ಪಾಂಡು

ಸ್ಫೂರ್ತಿ ರಾಮಾಯಣ-2

ಅಯೋಧ್ಯಾ ಕಾಂಡ

ರಾಮಾಯಣದ ಸ್ಫೂರ್ತಿಯ ಗಂಗಾಧಾರೆ ಅಯೋಧ್ಯಾಕಾಂಡದಲ್ಲಿ ತುಂಬಿ ಹರಿದಿದೆ. ಇದು ಭಾವಸ್ಫೂರ್ತಿಯ ಪ್ರವಾಹ. ಮನುಷ್ಯನ ಮನೋಭಿತ್ತಿಯ ವಿವಿಧ ಚಿತ್ರಗಳು ಇಲ್ಲಿ ಕಾಣಸಿಗುತ್ತವೆ. ಚಿತ್ತದ ಅವಸ್ಥಾಂತರಗಳಿವೆ ಇಲ್ಲಿ. ಭಾವವೇ ಬದುಕೂ ಸಾವೂ ಆಗುವ ವೈಚಿತ್ರ್ಯವಿದೆ.

ಸ್ಫೂರ್ತಿ ರಾಮಾಯಣ-2

ಮಹಾಭಾರತ ಅನ್ವೇಷಣೆ

ನಿಮ್ಮ ಪ್ರಶ್ನೆ – ಸಂಪ ಉತ್ತರ

ಪ್ರಶ್ನೋತ್ತರಗಳ ರೂಪದಲ್ಲಿಯೇ ಉದಿಸಿದ ವ್ಯಾಸರ ಮಹಾಭಾರತದ ಮೇಲೆ ಅಂದಿನಿಂದ ಇಲ್ಲಿಯತನಕ ಹುಟ್ಟಿದ ಪ್ರಶ್ನೆಗಳು ಲೆಕ್ಕವಿಲ್ಲದಷ್ಟು. ಅದಕ್ಕೆ ಕಾರಣ ಮಹಾಭಾರತದ ಆಳ ಮತ್ತು ಅಗಲಗಳು. ಅದರ ಕುರಿತಾದ ಜಿಜ್ಞಾಸೆ ಹಾಗೂ ಅನ್ವೇಷಣೆಗಳು ಮುಗಿಯಲಾರದವುಗಳು. ಅಂಥದೇ ಒಂದು ಕಾರ್ಯ ‘ಮಹಾಭಾರತ ಅನ್ವೇಷಣೆ’.

ಮಹಾಭಾರತ ಅನ್ವೇಷಣೆ

ಪೌರಾಣಿಕ ಕಥಾಗುಚ್ಛ

ಭಾರತದ ೧೦ ಪ್ರಸಿದ್ಧ ಮಹಿಳೆಯರು

ಪುರಾಣಗಳಲ್ಲಿ ಸ್ತ್ರೀಯರ ಕಥೆಗಳು ಬಹಳಷ್ಟಿದ್ದರೂ ಇನ್ನೂ ಅನೇಕ ಸ್ತ್ರೀಯರ ಚರಿತೆ ಜನಮಾನಸಕ್ಕೆ ತಿಳಿದಿಲ್ಲ. ಅತ್ಯದ್ಭುತ ವ್ಯಕ್ತಿತ್ವದ ಹಲವರು ಇಂದೂ ಮರೆಯಲ್ಲೇ ಇದ್ದಾರೆ. ಅಂತಹ ಹತ್ತು ಅಪರಿಚಿತ ಸ್ತ್ರೀಯರನ್ನು ‘ಪೌರಾಣಿಕ ಕಥಾಗುಚ್ಛ’ ಪರಿಚಯಿಸುತ್ತದೆ.

ಪೌರಾಣಿಕ ಕಥಾಗುಚ್ಛ

ಧರ್ಮ

ಒಳಹೊರಗಿನ ಬೆಳಕಿಗೆ; ಬವಣೆಯಿಲ್ಲದ ಬದುಕಿಗೆ

ಧರ್ಮ ಎಂದರೇನು ಎಂದು ಯಾರನ್ನಾದರೂ ಕೇಳಿದರೆ ಒಬ್ಬೊಬ್ಬರದು ಒಂದೊಂದು ಉತ್ತರ ಬಂದೀತು. ಯಾವುದು ಧರ್ಮ ಎಂದು ಗೊತ್ತಾಗದೇ ಗೊಂದಲ ಹಾಗೆಯೇ ಉಳಿದೀತು.

ಧರ್ಮ
ಬದುಕು ಬಹಳ ದೊಡ್ಡದು. ಅದೆಷ್ಟು ದೊಡ್ಡದು ಎನ್ನುವುದು ಗೊತ್ತಾಗಲು ಅಷ್ಟು ಬೆಳೆಯಬೇಕು. ಬೆಳೆಯದಿದ್ದರೆ ಇದ್ದಷ್ಟೇ ಬದುಕು. - ಮಹಾಭಾರತ ಅನ್ವೇಷಣೆ
ಕೆಲವು ಅವಮಾನಗಳನ್ನು ನುಂಗಬೇಕು. ಅಲ್ಲಿಯೇ ಮರೆಯಬೇಕು. ಬದುಕಿನ ಮುಂದಿನ ದಾರಿಯಲ್ಲೂ ಅದನ್ನು ಹೊತ್ತೊಯ್ದರೆ ಅದು ಕೆಡುಕೇ ಹೊರತು ಒಳಿತು ಮಾಡದು. - ಮಹಾಭಾರತ ಹೇಳಿಯೂ ಹೇಳದ್ದು
ಜೀವನ ಸುಖದ ಸೋಪಾನವಲ್ಲ. ದುಃಖವೂ ಅದರ ಸಂಗಾತಿಯೇ. ನೋವು ನಲಿವುಗಳೆರಡರ ಅನುಭವಕ್ಕೆಯೇ ಈ ಭವ ರೂಪುಗೊಂಡಿದ್ದು. ಪುಣ್ಯ-ಪಾಪಗಳ ಪರಿಣಾಮವೇ ಈ ಹುಟ್ಟು ತಾನೇ! - ಅಂದಿಗಷ್ಟು; ಇಂದಿಗಿಷ್ಟು
ಮನುಷ್ಯನನ್ನು ಸೋಲಿಸಬೇಕೆಂದರೆ ದೇವತೆಗಳು ಅವನ ಬುದ್ಧಿಯನ್ನು ಕೆಡಿಸುತ್ತಾರೆ. ಆಮೇಲೆ ಅವನಿಗೆ ಎಲ್ಲವೂ ಹಿಂದುಮುಂದಾಗಿ ಕಾಣತೊಡಗುತ್ತದೆ - ವಿದುರ
ತನ್ನೊಳಗಿನ ಕರೆಗೆ ಓಗೊಡುತ್ತಾನೆ ಕೃತಿಕಾರ. ಒಳಗಿಂದ ಹೊರಬಂದ ವಸ್ತುವಿಗೆ ವೈವಿಧ್ಯದುಡುಗೆ ತೊಡಿಸುತ್ತಾನೆ. ಪಾತ್ರಗಳನ್ನು ಪೋಷಿಸುತ್ತಾನೆ; ಸನ್ನಿವೇಶಗಳನ್ನು ಹೆಣೆಯುತ್ತಾನೆ; ಸಂದರ್ಭಗಳನ್ನು ಜೋಡಿಸುತ್ತಾನೆ. ಇಷ್ಟಾಗುವಾಗ ಕೃತಿ ಜನ್ಮ ತಾಳಿರುತ್ತದೆ. - ಹೂಬಾಣ

ಪುಸ್ತಕ ಪ್ರಪಂಚ

ವಿರಚಿತ ಕೃತಿಗಳು