ಕುಂತಿ-ಪಾಂಡು
ಅವಘಡವಾದ ಅವಕಾಶಗಳಲ್ಲೇ ಆದರ್ಶ ಮೆರೆದವರು
ಜೀವಂತಿಕೆ, ಕ್ರಿಯಾಶೀಲತೆ, ಮೇಧೆ, ಪ್ರಬುದ್ಧತೆ, ಗಾಂಭೀರ್ಯ, ವಿನಯ, ವಿದ್ಯೆ, ವಿವೇಕ, ತ್ಯಾಗಶೀಲತೆ, ಸಹಿಷ್ಣುತೆ, ಸಮರ್ಪಣೆ, ತಪಸ್ಸು, ಪಶ್ಚಾತ್ತಾಪ, ಸಹಾನುಭೂತಿ, ಸೇವೆ, ಸಾಮರ್ಥ್ಯ, ಕೌಶಲ, ದಾರ್ಢ್ಯ, ಕಷ್ಟ, ನಷ್ಟ, ಸೋಲು, ಗೆಲುವು, ಸವಾಲು, ಸಮೃದ್ಧಿ, ಸೌಂದರ್ಯ, ನೆನಪು, ಕನಸು, ಪ್ರೀತಿ, ವಾತ್ಸಲ್ಯ, ವಿಶ್ವಾಸ, ಓಟ, ನೆಲೆ.
ಬದುಕು ಬಹಳ ದೊಡ್ಡದು. ಅದೆಷ್ಟು ದೊಡ್ಡದು ಎನ್ನುವುದು ಗೊತ್ತಾಗಲು ಅಷ್ಟು ಬೆಳೆಯಬೇಕು. ಬೆಳೆಯದಿದ್ದರೆ ಇದ್ದಷ್ಟೇ ಬದುಕು. - ಮಹಾಭಾರತ ಅನ್ವೇಷಣೆ
ಕೆಲವು ಅವಮಾನಗಳನ್ನು ನುಂಗಬೇಕು. ಅಲ್ಲಿಯೇ ಮರೆಯಬೇಕು. ಬದುಕಿನ ಮುಂದಿನ ದಾರಿಯಲ್ಲೂ ಅದನ್ನು ಹೊತ್ತೊಯ್ದರೆ ಅದು ಕೆಡುಕೇ ಹೊರತು ಒಳಿತು ಮಾಡದು. - ಮಹಾಭಾರತ ಹೇಳಿಯೂ ಹೇಳದ್ದು
ಜೀವನ ಸುಖದ ಸೋಪಾನವಲ್ಲ. ದುಃಖವೂ ಅದರ ಸಂಗಾತಿಯೇ. ನೋವು ನಲಿವುಗಳೆರಡರ ಅನುಭವಕ್ಕೆಯೇ ಈ ಭವ ರೂಪುಗೊಂಡಿದ್ದು. ಪುಣ್ಯ-ಪಾಪಗಳ ಪರಿಣಾಮವೇ ಈ ಹುಟ್ಟು ತಾನೇ! - ಅಂದಿಗಷ್ಟು; ಇಂದಿಗಿಷ್ಟು
ಮನುಷ್ಯನನ್ನು ಸೋಲಿಸಬೇಕೆಂದರೆ ದೇವತೆಗಳು ಅವನ ಬುದ್ಧಿಯನ್ನು ಕೆಡಿಸುತ್ತಾರೆ. ಆಮೇಲೆ ಅವನಿಗೆ ಎಲ್ಲವೂ ಹಿಂದುಮುಂದಾಗಿ ಕಾಣತೊಡಗುತ್ತದೆ - ವಿದುರ
ತನ್ನೊಳಗಿನ ಕರೆಗೆ ಓಗೊಡುತ್ತಾನೆ ಕೃತಿಕಾರ. ಒಳಗಿಂದ ಹೊರಬಂದ ವಸ್ತುವಿಗೆ ವೈವಿಧ್ಯದುಡುಗೆ ತೊಡಿಸುತ್ತಾನೆ. ಪಾತ್ರಗಳನ್ನು ಪೋಷಿಸುತ್ತಾನೆ; ಸನ್ನಿವೇಶಗಳನ್ನು ಹೆಣೆಯುತ್ತಾನೆ; ಸಂದರ್ಭಗಳನ್ನು ಜೋಡಿಸುತ್ತಾನೆ. ಇಷ್ಟಾಗುವಾಗ ಕೃತಿ ಜನ್ಮ ತಾಳಿರುತ್ತದೆ. - ಹೂಬಾಣ