ಪೌರಾಣಿಕ ಕಥಾಗುಚ್ಛ | Pouranika Kathaguccha
ಪುರಾಣಗಳಲ್ಲಿ ಸ್ತ್ರೀಯರ ಕಥೆಗಳು ಬಹಳಷ್ಟಿದ್ದರೂ ಇನ್ನೂ ಅನೇಕ ಸ್ತ್ರೀಯರ ಚರಿತೆ ಜನಮಾನಸಕ್ಕೆ ತಿಳಿದಿಲ್ಲ. ಅತ್ಯದ್ಭುತ ವ್ಯಕ್ತಿತ್ವದ ಹಲವರು ಇಂದೂ ಮರೆಯಲ್ಲೇ ಇದ್ದಾರೆ. ಅಂತಹ ಹತ್ತು ಅಪರಿಚಿತ ಸ್ತ್ರೀಯರನ್ನು ‘ಪೌರಾಣಿಕ ಕಥಾಗುಚ್ಛ’ ಪರಿಚಯಿಸುತ್ತದೆ.
ಒಂದೊಂದು ಕಥೆಗಳೂ ಹೆಣ್ತನದ ವೈಶಿಷ್ಟ್ಯವನ್ನು ಹೇಳುವಂಥವೇ ಆಗಿವೆ.
ಪುರಾಣಸ್ತ್ರೀಯರ ಬಗೆಗೆ ಗೌರವದ ಭಾವವನ್ನು ಮೂಡಿಸುವ ಕೃತಿ ‘ಪೌರಾಣಿಕ ಕಥಾಗುಚ್ಛ’.
- ಲೋಹಿತ ಹೆಬ್ಬಾರ್