ಶ್ರೀಸುಶ್ರುತಾಚಾರ್ಯ /Shree sushruthacharya
ಸುಶ್ರುತಾಚಾರ್ಯ
ಬಹುಶೃತರಾದ ಸುಶ್ರುತಾಚಾರ್ಯರ ಕಾಲದಲಿ ಪುಣ್ಯಾತ್ಮರ ಅಂತೇವಾಸಿಗಳಾಗಿದ್ದು ಆಯುರ್ವೇದಾಧ್ಯಯನ ಮಾಡುವ ಭಾಗ್ಯ ನಮ್ಮ ತಲೆಮಾರಿಗೆ ದಕ್ಕದೇ ಹೋದುದಕೆ ಈರ್ಷ್ಯೆಪಡುವಂತಿದೆ ಅವರ ಜೀವಿತಾವಧಿಯ ಸಾಧನಾಪಥಾವಲೋಕನ ಸಂಬಂಧಿತ ಪ್ರಸ್ತುತ ಹೊತ್ತಗೆಯ ಅಡಕ. ಪಾರಂಪರಿಕ ಜ್ಞಾನಶಾಖೆಗಳ ಅಧ್ವರ್ಯರಾಗಿದ್ದ ಹೆಮ್ಮೆಯ ಭರತಖಂಡದ ಸುಮೇರು ಸದೃಶ, ಪ್ರಗಲ್ಭ ಪಾಂಡಿತ್ಯದ ಆಚಾರ್ಯ ಮಹಾಮಹೋಪಾಧ್ಯಾಯರ ಕ್ಲುಪ್ತ ಪರಿಚಯ – ಸಂಚಯಕ್ಕೆಂದೇ ಲಭ್ಯವಾಗುತ್ತಿರುವ ವಿಷಯವಸ್ತುವು ಸ್ಮೃತಿಪಟಲದಲಿ ಚಿರಂತನ ಸಂಗ್ರಹಯೋಗ್ಯವಾಗಿದ್ದು ಹೆಚ್ಚಿನದರ ಅನ್ವೇಷಣೆಗೆ ಇಂಬು ಕೊಡುವಂತಿದೆ. ಮನುಕುಲದ ಬೌದ್ಧಿಕ ಔನ್ನತ್ಯ ಸಾಧನೆಗೆ ಪೂರಕವಾಗಬಲ್ಲ ಸುಶ್ರುತಾಚಾರ್ಯರ ಪುಣ್ಯಸ್ಮರಣೆಯ ಜೊತೆಗೆ ಲುಪ್ತ ಚರಿತ್ರೆಯ ಸಂಬದ್ಧ ಅವಗಾಹನೆಯ ಸಾಧ್ಯವಾಗಿಸಿದ ಸರ್ವರೂ ಸಾರ್ವಕಾಲಿಕವಾಗಿ ಅಭಿನಂದನೀಯರು.
-ಕ. ಸುಚೇಂದ್ರ ಪ್ರಸಾದ ತ್ರಿವೇದಿ