ಶ್ರೀರಾಮಕೃಷ್ಣ ಪರಮಹಂಸರು / Shreeramakrisha paramahamsaru
ಪೂಜ್ಯ ಸ್ವಾಮಿ ಶಾಂತಿವ್ರತಾನಂದರು ಶ್ರೀರಾಮಕೃಷ್ಣಪರಮಹಂಸರ ಜೀವನಾಮೃತವನ್ನು ಈ ಪುಸ್ತಕದ ಮೂಲಕ ಓದುಗರಿಗೆ ಉಣಬಡಿಸಿದ್ದಾರೆ. ವಿಶ್ವಮಾನವರ ಬಾಲಲೀಲೆಗಳ ಹಾಗೂ ಅವರು ಅಧ್ಯಾತ್ಮದೆಡೆಗೆ ರೂಪಾಂತರವಾಗುವ ಬಗೆಯು ಓದುಗರಲ್ಲಿ ಧನಾತ್ಮಕ ಚಿಂತನೆಯನ್ನು ಮೂಡಿಸುತ್ತದೆ. ಕೃತಕ ಜ್ಞಾನವನ್ನು ಧಿಕ್ಕರಿಸಿ, ದಿವ್ಯಜ್ಞಾನದ ಪಥದಲ್ಲಿ ಸಾಗುವ ಪರಮಹಂಸರ ನಿಲುವು ಎಲ್ಲ ಪೀಳಿಗೆಗಳಿಗೂ ಮಾದರಿ. ಪರಮಹಂಸರ ಸಿದ್ಧಿ, ಸಾಧನೆ, ತುಡಿತ, ವ್ಯಾಕುಲತೆಯನ್ನು ಲೇಖಕರು ಎದುರಿಗೇ ನಡೆಯುತ್ತಿದೆ ಎನ್ನುವ ರೀತಿ ವ್ಯಾಖ್ಯಾನಿಸಿದ್ದಾರೆ. ಶ್ರೀ ರಾಮಕೃಷ್ಣರಪರಮಹಂಸರ ಸಾಧನೆ ಒಂದು ಶಿಖರ, ಆ ಶಿಖರದ ನಿಖರ ಪರಿಚಯವನ್ನು ನೀಡುತ್ತಾ ಈ ಪುಸ್ತಕ ಸಾಗುತ್ತದೆ. ಗುರುಗಳ ಜೀವನವನ್ನು ಆಧರಿಸಿ ಎಷ್ಟೋ ಪುಸ್ತಕಗಳು ಬಂದಿವೆ, ಆದರೆ ಈ ಪುಸ್ತಕವು ತನ್ನ ಸರಳತೆಯಿಂದ ಜನಸಾಮಾನ್ಯರ ಹೃದಯಕ್ಕೆ ತುಂಬಾ ಹತ್ತಿರವಾಗಿ ನಿಲ್ಲುತ್ತದೆ.
ಪ್ರದೀಪ್ ಬೇಲೂರು