ಶ್ರೀಶ್ರೀಧರ ಸ್ವಾಮಿಗಳು / Shree shreedharaswamigalu
ಶ್ರೀಧರಸ್ವಾಮಿಗಳು
ಶ್ರೀ ಶ್ರೀಧರಸ್ವಾಮಿಗಳು ಸಮರ್ಥ ರಾಮದಾಸರ ದಿವ್ಯಾನುಗ್ರಹ ಪಡೆದ ಅವಧೂತಶ್ರೇಷ್ಠರು. ಆರ್ಯಸಂಸ್ಕೃತಿ ಮತ್ತು ಸನಾತನ ಧರ್ಮದ ಪುನರುತ್ಥಾನಕ್ಕಾಗಿ ಅವತರಿಸಿದ ದತ್ತಾತ್ರೇಯನ ಮಾನುಷರೂಪ. ಲೌಕಿಕ ಬದುಕನ್ನು ತ್ಯಜಿಸಿ, ಸಂನ್ಯಾಸ ಸ್ವೀಕಾರ ಮಾಡಿ, ಪರಿವ್ರಾಜಕ ಚಿತ್ತವೃತ್ತಿಯಿಂದ, ನಿತ್ಯ ನಿರಂತರ ಸಂಚಾರ ನಿರತರಾಗಿ, ಧರ್ಮಬೋಧನೆ ಗೈಯುತ್ತ, ನೊಂದವರ ಸೇವೆಗೈಯಲು ಗುರುಕಾರುಣ್ಯದ ಮೂರ್ತರೂಪವಾಗಿ ಧರೆಗಿಳಿದ ಶ್ರೀ ಶ್ರೀಧರರ ಕುರಿತು ಈ ವೇಳೆಗೆ, ಪ್ರಸ್ತುತ ಕಾಲಘಟ್ಟದಲ್ಲಿ ನಡೆಯಬೇಕಿದ್ದ ಸ್ತುತ್ಯಕಾರ್ಯ. ಈ ಪುಣ್ಯಕಾರ್ಯಕ್ಕೆ ಶ್ರಮಿಸಿದ ಲೇಖಕ ಶ್ರೀ ಪ್ರಸನ್ನ ಮಾವಿನಕುಳಿಯವರೂ, ಪ್ರಕಟಿಸಿ ಕೃತಕೃತ್ಯರಾದ ಶ್ರೀಭಾರತೀ ಪ್ರಕಾಶನದ, ಗುರುಗ್ರಂಥಮಾಲಿಕೆಯ ಪದಾಧಿಕಾರಿಗಳೂ ಅಭಿನಂದನಾರ್ಹರು.
ಡಾ| ಗಜಾನನ ಶರ್ಮ
ಸಾಹಿತಿಗಳು