ಸ್ಫೂರ್ತಿ ರಾಮಾಯಣ-2, ಅಯೋಧ್ಯಾ ಕಾಂಡ | SPOORTI RAMAYANA-2: AYODHYA KAANDA
ರಾಮಾಯಣದ ಸ್ಫೂರ್ತಿಯ ಗಂಗಾಧಾರೆ ಅಯೋಧ್ಯಾಕಾಂಡದಲ್ಲಿ ತುಂಬಿ ಹರಿದಿದೆ. ಇದು ಭಾವಸ್ಫೂರ್ತಿಯ ಪ್ರವಾಹ. ಮನುಷ್ಯನ ಮನೋಭಿತ್ತಿಯ ವಿವಿಧ ಚಿತ್ರಗಳು ಇಲ್ಲಿ ಕಾಣಸಿಗುತ್ತವೆ. ಚಿತ್ತದ ಅವಸ್ಥಾಂತರಗಳಿವೆ ಇಲ್ಲಿ. ಭಾವವೇ ಬದುಕೂ ಸಾವೂ ಆಗುವ ವೈಚಿತ್ರ್ಯವಿದೆ.
***
ರಾಮಾಯಣ ರಾಮಾಯಣವಾಗಲು ತೊಡಗುವುದು ಇಲ್ಲಿ. ಹಾಗಾಗಿ ಇದನ್ನು ರಾಮಾಯಣದ ಸ್ಫೂರ್ತಿ ಎನ್ನಲೇನೂ ಅಡ್ಡಿಯಿಲ್ಲ. ಕವಿ ವಾಲ್ಮೀಕಿ ಆ ರಸಘಟ್ಟಗಳನ್ನು ರಸಮಯವಾಗಿಯೇ ಚಿತ್ರಿಸಿದ್ದಾರೆ. ರಾಮಾಯಣ ಕರುಣರಸದ ಆಕರ ಎನ್ನುವ ಮಾತಿದೆ. ಅದಕ್ಕೆ ಅಯೋಧ್ಯಾಕಾಂಡವೇ ಭಿತ್ತಿ.
***
ಕುಟುಂಬ ಮತ್ತು ಸಮೂಹದ ಪ್ರೀತಿ – ಅಪ್ರೀತಿಗಳ ಚಿತ್ರಣ ಅಯೋಧ್ಯಾಕಾಂಡದ್ದು.
ಅದು ಹೇಗೆ ಬದುಕಿನ ಸ್ಫೂರ್ತಿಯಾಗುತ್ತದೆ ಎನ್ನುವುದನ್ನು ಹೇಳಲು ಈ ಕೃತಿ ಹೊರಟಿದೆ.