ವಿದುರ | VIDURA
ವಿದುರನೆಂದರೆ:
ಪ್ರಭುತ್ವಕ್ಕೆ ನಿಷ್ಠನಾಗಿದ್ದೂ ಪ್ರಭುತ್ವವನ್ನು ಪ್ರಶ್ನಿಸುವ ಎದೆಗಾರಿಕೆ;
ವ್ಯವಸ್ಥೆ ಹಾಳಾಗಿದೆಯೆಂದು ಅದನ್ನು ನಿರಾಕರಿಸದೆ, ಸರಿಪಡಿಸುವ ಪ್ರಬುದ್ಧತೆ;
ವ್ಯಕ್ತಿಗೌರವವನ್ನು ಕಳೆದುಕೊಳ್ಳದೆಯೇ ಆ ವ್ಯಕ್ತಿಯ ತಪ್ಪನ್ನು ಹೇಳುವ ಸಹನಶೀಲತೆ;
ತನ್ನವರೆನ್ನುವ ಅದಮ್ಯ ಪ್ರೀತಿಯನ್ನಿಟ್ಟುಕೊಂಡೂ ಲೋಕವಿರೋಧಿಯಾದಾಗ ಪರಿತ್ಯಾಗ ಮಾಡುವ ಮೋಹರಹಿತತೆ;
ಬಲ, ಹಣ, ಪ್ರಭಾವ ಯಾವುದಕ್ಕೂ ಬಗ್ಗದ – ಜಗ್ಗದ ನ್ಯಾಯನಿಷ್ಠುರತೆ.
ವಿದುರನೆಂದರೆ:
ಲೋಕಹಿತೈಷಿ; ದೇಶನಿಷ್ಠ; ಕುಟುಂಬಪ್ರೇಮಿ; ಪ್ರಜಾರಕ್ಷಕ;
ಸಿದ್ಧ-ಬುದ್ಧ-ಪ್ರಬುದ್ಧ; ಸಹಿಷ್ಣು; ನ್ಯಾಯತತ್ಪರ; ಸತ್ಯವಾದಿ; ಧೀರ; ಮಾರ್ಗದರ್ಶಿ;
ರಾಜನೀತಿವಿಶಾರದ; ಶಾಸ್ತ್ರಜ್ಞ; ಧೀಮಂತ;
ನಿರ್ಮೋಹಿ; ತ್ಯಾಗಿ; ವಿರಾಗಿ.
ವಿದುರನ ಈ ಅದ್ಭುತ ವ್ಯಕ್ತಿತ್ವವನ್ನು ಕಟ್ಟಿಕೊಡುವ ಪ್ರಯತ್ನವೇ ಈ ಕೃತಿ.