Yathiraj Veerambudhi
Yathiraj Veerambudhi
ಜಗದೀಶಶರ್ಮಾ ಸಂಪರ ಬರವಣಿಗೆಯ ಶಕ್ತಿ.!
ಕೇವಲ 144 ಪುಟಗಳ ಪುಟ್ಟ ಪುಸ್ತಕದಲ್ಲಿ ಇಡೀ ಮಹಾಭಾರತದ ಸಾರವನ್ನು ಉಣಬಡಿಸಿದ್ದಾರೆ ಲೇಖಕ ಶ್ರೀ ಜಗದೀಶಶರ್ಮಾ ಸಂಪ. ಜೊತೆಗೆ ರಾಮಾಯಣದಿಂದ ಕೆಲವು ಘಟನೆಗಳು ಮತ್ತು ಪಾತ್ರಗಳನ್ನು ಹೋಲಿಕೆಗೆ ಇಲ್ಲಿ ತಂದಿದ್ದಾರೆ.
ಇದು ಪ್ರಶ್ನೋತ್ತರದ ಪುಸ್ತಕ. ಆದರೂ ಅದು ಹೇಗೆ ಇಡಿಯ ಮಹಾಭಾರತ ಓದುಗರ ಮುಂದೆ ಸಂಪರು ಇಟ್ಟಿದ್ದಾರೆ ಎಂಬುದು ಸೋಜಿಗ.
ಒಂದು ಅಧ್ಯಾಯದಲ್ಲಿ ಧೃತರಾಷ್ಟ್ರ ಕೊನೆಯಲ್ಲಿ ‘ನಾನು ಗೆಲುವಿನ ಆಸೆ ಬಿಟ್ಟೆ’ ಎಂದು ಪ್ರತಿಯೊಂದು ಸಲ ಹೇಳುವಾಗ ಇಡೀ ಮಹಾಭಾರತ ಕಣ್ಮುಂದೆ ಬರುತ್ತದೆ.
ಮಹಾಭಾರತ ಓದಿದವರಿಗೆ ಇದು ಪುನಶ್ಚರಣ. ಲೇಖಕರ ಈ ದೃಷ್ಟಿಕೋನದಿಂದ ಮತ್ತೆ ಮಹಾಭಾರತ ಓದಬೇಕು ಎನ್ನುವ ಆಸೆ ಉಂಟುಮಾಡುತ್ತದೆ. ಒಮ್ಮೆ ಕೂಡ ಮಹಾಭಾರತ ಓದದವರಿಗೆ ಓದಬೇಕು ಎನ್ನಿಸುವಂತಿದೆ.
ಧನ್ಯವಾದಗಳು ಲೇಖಕ ಶ್ರೀ ಜಗದೀಶಶರ್ಮಾ ಸಂಪ ಮತ್ತು ಇಂತಹ ಉಪಯುಕ್ತ ಹೊತ್ತಗೆ ಸರಣಿಯ ಮೊದಲ ಭಾಗವನ್ನು ಹೊರತಂದ ಸದಾ ಉತ್ಸಾಹೀ ಪ್ರಕಾಶಕ ಶ್ರೀ ಜಮೀಲ್ ಸಾವಣ್ಣ – ಇಬ್ಬರಿಗೂ.