Yathiraj Veerambudhi
Yathiraj Veerambudhi
ಜಸ್ಟ್ 1 ಗಂಟೆ ಹೊತ್ತಗೆಗಳು
ಭಗವದ್ಗೀತೆ
ನಿಮಗೆ ಬೇಕಾದ್ದು

ಭಗವದ್ಗೀತೆಯಲ್ಲಿದೆ

ಸಾವಣ್ಣ ಪ್ರಕಾಶನದ ಶ್ರೀ ಜಮೀಲ್ ಸಾವಣ್ಣ ನನಗೆ ಗೀತೆಯ ಬಗ್ಗೆ ಪುಸ್ತಕ ಬರೆಯಿರೆಂದಾಗ ಬೆಚ್ಚಿದ್ದೆ. ನನ್ನ ‘ಗೀತೆ ಬಚ್ಚಿಟ್ಟಿದ್ದ ಬದುಕಿನ ಪಾಠಗಳು’ ಮನುಷ್ಯರ ಗುಣ ವರ್ತನೆಗಳ ಬಗ್ಗೆ ಇದೆ. ನಂತರ ‘ಬದುಕು ಭಾರ ಗೀತಾ ಪರಿಹಾರ’ ಪುಸ್ತಕದಲ್ಲಿ ಬದುಕಿನ ಸಮಸ್ಯೆಗಳಿಗೆ ಗೀತೆಯಲ್ಲಿ ಪರಿಹಾರ ಹುಡುಕುವ ಪ್ರಯತ್ನ ಮಾಡಿದ್ದೇನೆ.

ಶ್ರೀ ಜಗದೀಶಶರ್ಮಾ ಸಂಪರು ಈ ಪುಟ್ಟ ಪುಸ್ತಕದಲ್ಲಿ ಇಡೀ 700 ಶ್ಲೋಕಗಳ ಸಾರ ನೀಡಿದ್ದಾರೆ.
ಅಂತರಂಗದ ಶಾಂತಿ ಹೇಗೆ ನಿಶ್ಚಯವಾಗಿ ಸಿಗುತ್ತದೆ… ಎನ್ನುವುದಕ್ಕೆ
ಇರುವುದರ ಆಸ್ಥೆ ಬಿಟ್ಟರೆ
ಬರುವುದರ ಆಸೆ ಬಿಟ್ಟರೆ
ಇದು ನನ್ನದು ಎಂಬ ಮಮತೆ ಬಿಟ್ಟರೆ
ಇದು ನನ್ನಿಂದ ಎಂಬ ಅಹಂಕಾರ ಬಿಟ್ಟರೆ
ಎನ್ನುತ್ತಾರೆ. ಒಂದು ರೀತಿಯಲ್ಲಿ ಇದು ಗೀತಾಸಾರ ಎನ್ನಬಹುದೇನೋ…
ಧ್ಯಾನ ಮಾಡುವ ವಿಧಾನ ವಿವರಿಸಿದ್ದಾರೆ.
ಯಾರ ದೇಹಕ್ಕೆ ಶೀತ ಉಷ್ಣಗಳು ಬೇರೆ ಬೇರೆ ಅಲ್ಲವೋ, ಯಾರ ಮನಸ್ಸಿಗೆ ಸುಖ ದುಃಖಗಳ ವ್ಯತ್ಯಾಸ ಇಲ್ಲವೋ, ಯಾರಿಗೆ ಮಾನ ಅಪಮಾನಗಳು ಪ್ರತ್ಯೇಕ ಅಲ್ಲವೋ ಅವನು ಸದಾ ನನ್ನ ಧ್ಯಾನದಲ್ಲಿರುತ್ತಾನೆ ಎಂದಿದ್ದಾನೆ ಗೀತಾಚಾರ್ಯ. ಅಷ್ಟು ಶಕ್ತಿ ಇದೆ ಗೀತೆಯಲ್ಲಿ.
ಮಕ್ಕಳು ಗೀತೆಯನ್ನು ಚಿಕ್ಕಂದಿನಲ್ಲಿ ಅಭ್ಯಾಸ ಮಾಡಿದರೆ ದೊಡ್ಡವರಾದ ನಂತರ ನ್ಯಾಯಾಲಯದಲ್ಲಿ ಗೀತೆಯ ಮೇಲೆ ಕೈಯಿಟ್ಟು ಸುಳ್ಳು ಪ್ರಮಾಣ ಮಾಡಲಾರರೇನೋ..!
ಈ ಹೊತ್ತಗೆ ನನಗೆ ಬಲು ಇಷ್ಟ ಆಯಿತು… ಏಕೆಂದರೆ ಗೀತೆ ಬಗ್ಗೆ ನನಗೆ ಬಹಳ ಆಸಕ್ತಿ.

ಇಂತಹ ವಿಶಿಷ್ಟವಾದ ಹೊತ್ತಗೆ ಹೊರತಂದ ಲೇಖಕರಿಗೆ ಮತ್ತು ಪ್ರಕಾಶಕರಿಗೆ ನಮನಗಳು.

Yathiraj Veerambudhi Facebook Post Link