Yathiraj Veerambudhi
Yathiraj Veerambudhi
ಜಸ್ಟ್ 1 ಗಂಟೆ ಹೊತ್ತಗೆಗಳು
ಧರ್ಮ
ಒಳಹೊರಗಿನ ಬೆಳಕಿಗೆ;
ಬವಣೆಯಿಲ್ಲದ ಬದುಕಿಗೆ
ಈ ಹೊತ್ತಗೆಗೆ ಶ್ರೀ ಜಗದೀಶಶರ್ಮಾ ಸಂಪ ಅವರಿಗೆ ನಮನಗಳು.
ಧರ್ಮ ಎನ್ನುವ ಶಬ್ದದ ಅರ್ಥ ಅಗಾಧ. ಆಂಗ್ಲದಲ್ಲಿ ಸರಳವಾಗಿ ರಿಲಿಜನ್ ಎಂದುಬಿಡುವರೇನೋ…
ಧರ್ಮದ ದಶಮುಖಗಳನ್ನು ಓದುಗರ ಮುಂದೆ ಅನಾವರಣ ಮಾಡಿದ್ದಾರೆ ಶ್ರೀ ಸಂಪ.

ಏನು ಮಾಡಬೇಕು, ಏನು ಮಾಡಕೂಡದು ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಲೇಖಕರು.

ಇದರಲ್ಲಿರುವ ಬಹ್ವಂಶ ಕಥೆಗಳನ್ನು ಓದುತ್ತಿದ್ದಂತೆ, ‘ಅರೆರೆ! ಈ ಕಥೆ ನಮಗೆ ಚಿಕ್ಕಂದಿನಲ್ಲಿ ನೀತಿಪಾಠದ ತರಗತಿಯಲ್ಲಿ ಉಪಾಧ್ಯಾಯರು ಹೇಳಿದ್ದರಲ್ಲವೇ!’ ಎನಿಸುತ್ತದೆ. (ದುರದೃಷ್ಟವಶಾತ್ ಈಗ ಶಾಲೆಗಳಲ್ಲಿ ಪ್ರಾಯಶಃ ನೀತಿಪಾಠದ ತರಗತಿಗಳೂ ಇರುವುದಿಲ್ಲ ; ಮತ್ತು ತಮ್ಮ ಮಕ್ಕಳಿಗೆ ಇಂತಹ ಕಥೆಗಳನ್ನು ಹೇಳುವ ವ್ಯವಧಾನ ಬಹುತೇಕ ಹಿರಿಯರಿಗೆ ಬಹುಶಃ ಇರಲಾರದು)

ಧರ್ಮ ಎನ್ನುವ ಕಹಿಯಾದ ಅನಿವಾರ್ಯ ಗುಳಿಗೆಗೆ ಕಥೆಗಳು ಎಂಬ ಸಕ್ಕರೆ ಲೇಪ ಮಾಡಿ ಉಣಬಡಿಸಿದ್ದಾರೆ ಲೇಖಕರು. ಮಕ್ಕಳಿಗೆ ಈ ಪುಸ್ತಕ ಕೊಟ್ಟು ಹಿರಿಯರು ಓದಿಸಿದರೆ ಮಕ್ಕಳ ಮೆದುಳಿನಲ್ಲಿ ಧರ್ಮದ ಬಗೆಗಿನ ಗೌರವ ಶಾಶ್ವತವಾಗಿ ಉಳಿಯುತ್ತದೆ. ಏಕೆಂದರೆ ಧರ್ಮೋ ರಕ್ಷತಿ ರಕ್ಷಿತಃ(ನಾವು ಧರ್ಮವನ್ನು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ).

ಲೇಖಕರು ಮತ್ತು ಪ್ರಕಾಶಕರು ಈ ಹೊತ್ತಗೆ ಹೊರತಂದಿದ್ದಕ್ಕೆ ಅಭಿನಂದನಾರ್ಹರು.

Yathiraj Veerambudhi Facebook Post Link