Yathiraj Veerambudhi
Yathiraj Veerambudhi
ಜಸ್ಟ್ 1 ಗಂಟೆ ಪುಸ್ತಕ ಮಾಲೆ
ಶ್ರೀ ಜಗದೀಶಶರ್ಮಾ ಸಂಪ ಅವರನ್ನು ಭೇಟಿ ಆದರೆ ಅವರ ಮೃದು ಮಾತಿನ ಮೋಡಿಗೆ ಸಿಲುಕುವುದು ಖಾತ್ರಿ.
ಅವರ ಯೂ ಟ್ಯೂಬ್ ಪ್ರವಚನಗಳು ಕೂಡ ಪ್ರೇರೇಪಕ.
ಅವರ ಆರು ಜಸ್ಟ್ 1 ಗಂಟೆ ಪುಸ್ತಕಗಳು ನೆನ್ನೆ ಪ್ರಕಾಶಕ ಶ್ರೀ ಜಮೀಲ್ ನನ್ನನ್ನು ವೇದಿಕೆಗೆ ಕರೆಸಿ ಜನಪ್ರಿಯ ನಟ ಶ್ರೀ ರಮೇಶ್ ಅರವಿಂದ್ ಅವರಿಂದ ಕೊಡಿಸಿದರು.
ನೆನ್ನೆ ಅವುಗಳಲ್ಲಿ ಒಂದು ಪುಸ್ತಕ ಓದಿದೆ… ಊಹೂಂ ಓದಿಸಿಕೊಂಡು ಹೋಯಿತು..!
ಆತ್ಮಗುಣ 8 ಇದ್ದರೆ ನೆಮ್ಮದಿ
ಅಬ್ಬಾ… ಅದೆಷ್ಟು ಸರಳ ಸುಂದರ ಭಾಷೆ. ಕನ್ನಡ ಸ್ಪಷ್ಟವಾಗಿ ಓದಲು ಬರುವ ಮಕ್ಕಳಿಗೆ ಕೂಡ ಇದೊಂದು ಪಠ್ಯದಂತಿದೆ.
ಸರಳ ಪದಗಳನ್ನು ಉಪಯೋಗಿಸಿ ಎಂಟು ಆತ್ಮಗುಣಗಳ ಬಗ್ಗೆ ಬರೆದು, ನಂತರ ಆಬಾಲವೃದ್ಧರಾದಿಯಾಗಿ ಎಲ್ಲರನ್ನೂ ಆಕರ್ಷಿಸುವ ಕಥೆಯ ಪ್ರಕಾರ ಬಳಸಿ, ಈ ಎಂಟು ಆತ್ಮಗುಣಗಳಿಗೆ ಸಂಬಂಧಿಸಿದಂತೆ ಪ್ರಾಚೀನ, ಅರ್ವಾಚೀನ, ಪ್ರಚಲಿತ ಮತ್ತು ಗ್ಲೋಬಲ್ ಪುಟ್ಟ ಪುಟ್ಟ ಕಥೆಗಳನ್ನು ಪರಿಣಾಮಕಾರಿಯಾಗಿ ಬರೆದಿದ್ದಾರೆ.
ಸಂಗ್ರಹ ಯೋಗ್ಯ ಈ ಆರು ಜಸ್ಟ್ 1 ಗಂಟೆ ಹೊತ್ತಗೆಗಳು.
ಇನ್ನೂ ಅನೇಕಾನೇಕ ಇಂತಹ ಪುಸ್ತಕಗಳು ಬರಲೆಂದು ಆಶಿಸುವೆ.
ಇಂತಹ ಅನನ್ಯ ಪುಸ್ತಕ ಸರಣಿ ಹೊರತಂದ ಲೇಖಕರಿಗೆ ಮತ್ತು ಪ್ರಕಾಶಕರಿಗೆ ಅಭಿನಂದನೆಗಳು.
Yathiraj Veerambudhi Facebook Post Link