ಮಹರ್ಷಿ ಪತಂಜಲಿ / Maharshi patanjali

ಮಹರ್ಷಿ ಪತಂಜಲಿ / Maharshi patanjali

ಪ್ರಕಾಶಕರು : ಶ್ರೀಭಾರತೀ ಪ್ರಕಾಶನ
ಪ್ರಕಾಶಿತ ವರ್ಷ : 2014 - 2024
ಭಾಷೆ : ಕನ್ನಡ
Buy book using below links

ನಮ್ಮ ಬದುಕಿನ ಒಳಿತಿಗೆ ಏನೆಲ್ಲ ಬೇಕು? ಶಾರೀರಿಕ ಆರೋಗ್ಯ, ಮಾನಸಿಕ ನೆಮ್ಮದಿ, ಸುಂದರ ನುಡಿಗೆ ಶುದ್ಧ ಭಾಷೆ ಹಾಗೂ ಅಂತಿಮ ನಡೆಯಾದ ಮೋಕ್ಷಪ್ರಾಪ್ತಿ. ಮಾನವನ ಕ್ಷೇಮಕ್ಕಾಗಿ ಈ ನಾಲ್ಕನ್ನೂ ಅನುಗ್ರಹಿಸಿದ ಪರಮರ್ಷಿ ಪತಂಜಲಿ. ಶರೀರ ಸ್ವಾಸ್ಥ್ಯಕ್ಕಾಗಿ ಆರೋಗ್ಯಗ್ರಂಥ ‘ಚರಕಸಂಹಿತೆ’, ಚಿತ್ತದ ಉನ್ನತಿಗೆ ಯೋಗದ ಮೇರುಗ್ರಂಥ ‘ಯೋಗಸೂತ್ರ’, ಮಾತೃಭಾಷೆ ಸಂಸ್ಕೃತದ ಶುದ್ಧತೆಗೆ ‘ವ್ಯಾಕರಣಮಹಾಭಾಷ್ಯ’, ಪುರುಷಾರ್ಥಗಳಲ್ಲಿ ನಾಲ್ಕನೆಯದಾದ ದೇವಸಾಯುಜ್ಯದ ಗುರಿ ಸಾಧನೆಗಾಗಿ ‘ಪರಮಾರ್ಥಸಾರ’ ಹೀಗೆ ನಾಲ್ಕು ಅತುಲ್ಯರತ್ನಗಳ ಅಮೃತಧಾರೆಯೆರೆದ ಅದಿಶೇಷನ ಅವತಾರವಾದ ಶ್ರೀಭಗವಾನ್ ಪತಂಜಲಿ ಮಹರ್ಷಿ ಪ್ರಾತಃ ಸ್ಮರಣೀಯ, ಪ್ರಥಮ ಸ್ಮರಣೀಯ.

ಹಿರಿಯ ಸಂಸ್ಕೃತ ವಿದ್ವಾಂಸರಾದ ಡಾ| ಗಣಪತಿ ಭಟ್ ಅವರು ಮಹರ್ಷಿಪತಂಜಲಿಯ ಅರ್ಷವಾಕ್ಯ, ದಿವ್ಯಭವ್ಯ ಸ್ವರೂಪವನ್ನು ಕೃತಿಯಲ್ಲಿ ಮಾರ್ಮಿಕವಾಗಿ ದರ್ಶಿಸಿದ್ದಾರೆ. ಕೃತಿಕಾರರು ಹಾಗೂ ಧರ್ಮಜ್ಞಾನ ಪ್ರಸರಣದ ಅಗ್ರಸಂಸ್ಥೆ ಶ್ರೀಭಾರತೀ ಪ್ರಕಾಶನಕ್ಕೆ ಅಭಿನಂದನೆ ಹಾಗೂ ಅಭಿವಂದನೆಗಳು.

ಡಾ. ಗಿರಿಧರ ಕಜೆ
ಆಯುರ್ವೇದ ತಜ್ಞ

Leave a Reply

Your email address will not be published. Required fields are marked *