ವ್ಯಾಸ ಸಂದರ್ಶನ | Vyasa Sandarshana

ವ್ಯಾಸ ಸಂದರ್ಶನ | Vyasa Sandarshana

ಸಂಪ ಕೇಳಿದ್ದು; ವ್ಯಾಸ ಹೇಳಿದ್ದು

ಪ್ರಕಾಶಕರು : ಸಾವಣ್ಣ ಪ್ರಕಾಶನ
ಪ್ರಕಾಶಿತ ವರ್ಷ : 2025
ಭಾಷೆ : ಕನ್ನಡ
Buy book using below links

ಒಬ್ಬ ವ್ಯಕ್ತಿ ಒಂದು ಬದುಕಿನಲ್ಲಿ ಏನೆಲ್ಲ ಮಾಡಬಹುದು? ಎಂದು ಕೇಳಿದರೆ ವ್ಯಾಸರನ್ನು ನೋಡಿ ಎನ್ನುತ್ತೇನೆ.

ಅಷ್ಟು ಕೆಲಸ ಅವರದ್ದು!

ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು ಎಲ್ಲರಿಗೂ ಬೇಕಾಗುವಂತೆ ಆದವರು ಅವರು.

ಜಗತ್ತು ಅವರನ್ನು ಕರೆದು ಅನುಗ್ರಹ ಮಾಡಿಸಿಕೊಂಡಿದ್ದಲ್ಲ; ಅವರೇ ಹೋಗಿ ಹೋಗಿ ಒಳಿತು ಮಾಡಿದವರು.

ಇಷ್ಟಾರು ರಚನೆಗೆ ಅವರಿಗೆ ಯಾರೂ ಸೂಚಿಸಿದ್ದಲ್ಲ; ಅವರೇ ಯೋಜಿಸಿ ಬರೆದರು.

‘ಒಳಿತು ಮಾಡುವುದು ಕರ್ತವ್ಯ; ಮಾಡುತ್ತಾ ಸಾಗುತ್ತೇನೆ’ ಎಂಬ ವಿಶ್ವಹಿತದ ಭಾವ ಅವರದ್ದು.

ಅವರು ಕೋಪಗೊಂಡದ್ದಿಲ್ಲ, ಶಾಪ ಕೊಟ್ಟಿದ್ದಿಲ್ಲ, ಬೈದಿದ್ದಿಲ್ಲ; ಭಂಗಿಸಿದ್ದಿಲ್ಲ. ಆದರೆ ಅದೆಷ್ಟು ಜನರ ಬದುಕಿನ ಓರೆಕೋರೆ ತಿದ್ದಿದ್ದರು!

ಲೋಕ ಸದಾ ತನ್ನ ಓರೆಕೋರೆಯನ್ನು ನೋಡಿ ತಿದ್ದಿಕೊಳ್ಳಲು ಬೇಕಾಗುವ ಕನ್ನಡಿಯಂಥ ಕೃತಿಗಳನ್ನು ಕೊಟ್ಟರು.

ವ್ಯಾಸರೊಡನೆಯ ಒಂದು ಸಂವಾದ ಇಲ್ಲಿದೆ. ವಾದವೆಂದರೆ ಮಾತು. ಅವರು ಮಾತಿನ ಮೇರು; ವಾಹ್ಮಯದ ಚಕ್ರವರ್ತಿ, ಅವರ ಮಾತೆಲ್ಲ ಸುವಾದವೇ, ಸಂವಾದವೇ. ಏಕೆ ಮಾತಾಡಬೇಕೋ ಅದಕ್ಕಾಗಿ: ಹೇಗೆ ಮಾತಾಡಬೇಕೋ ಹಾಗೆ ಮಾತಾಡಿ ತೋರಿಸಿದವರು ಅವರು.

ಅವರ ಮಾತೂ, ಅವರ ಮಾತಿನ ವಿಧಾನವೂ ಮಾದರಿಯಾದರೆ ಈ ಮಾತುಗಳಿಗೆ ಸಾರ್ಥಕತೆ.

Leave a Reply

Your email address will not be published. Required fields are marked *